ರತಿ ಪಾಂಡೆ ಒಬ್ಬ ಭಾರತೀಯ ನಟಿ . ಪೋರಸ್, ಹಿಟ್ಲರ್ ದೀದೀ, ಮಿಲೇ ಜಬ್ ಹಮ್ ತುಮ್, ಬೆಗುಸರಾಯ್, ಹರ್ ಘರ್ ಕುಚ್ ಕೆಹ್ತಾ ಹೆ ಮತ್ತು ಶಾದಿ ಸ್ಟ್ರೀಟ್ ಧಾರವಾಹಿಗಳಲ್ಲಿನ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. == ಜನನ ಮತ್ತು ಆರಂಭಿಕ ಜೀವನ == ರತಿ ಪಾಂಡೆ ಅಸ್ಸಾಂನಲ್ಲಿ ಜನಿಸಿದರು. ಅಲ್ಲಿ ಏಳು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಅಲ್ಲಿ ಪ್ರಾಥಮಿಕ ಶಾಲೆಯನ್ನು ಪೂರ್ಣಗೊಳಿಸಿದರು . ನಂತರ ಅವರು ಪಟ್ನಕ್ಕೆ ತೆರಳಿ ಅಲ್ಲಿ ಸೇಂಟ್ ಕರೆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ನವದೆಹಲಿಯ ಸಾದಿಕ್ ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯಿಂದ ಮುಂದಿನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು . ರತಿ ದೆಹಲಿ ವಿಶ್ವವಿದ್ಯಾಲಯದ ಮಿರಾಂದಾ ಹೌಸ್‌ನಲ್ಲಿ ವಾಣಿಜ್ಯ ವಿಷಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪರಿಣತಿ ಪಡೆದರು. == ಫಿಲ್ಮೋಗ್ರಾಫಿ == === ಟಿವಿ ಸರಣಿಗಳು === === ನಿರೂಪಕಿಯಾಗಿ === === ಅತಿಥಿಯಾಗಿ === === ಪ್ರದರ್ಶನಗಳು === == ಉಲ್ಲೇಖಗಳು ==